India is often referred to as the spiritual cradle of the world. Many spiritual traditions have originated in this blessed land. From the beginning of the human civilization, pre-Aryan India was home to indigenous religions. The remnants of these can be found in Agamic sects like Shaivism. Later, Aryans settled in India and are credited with the emergence of Vedic culture. The Vedic religion and Agamic practices like Shaivaism can be considered as the two main streams of ancient Indian traditions. Later, religions like Buddhism and Jainism were born giving rise to a wide spectrum of religions in India. Over the millennia, many traditions and customs came into practice in this land. By the 12th century, Indian society was a conglomerate of many practices and beliefs. Jainism and Buddhism had seen their heyday and had settled into defined pockets of the society. Caste system, multiple deity worship, and sacrificial rites were prevalent in the main-stream Vedic society. The social structure was based on the caste system with wide spread discrimination against lower-caste members and women.
It was under this social dynamics that the revolution of Guru Basavanna took shape. Guru Basavanna formulated his spiritual revolution that challenged the prevalent social and religious practices. While it is accepted by all scholars that the time of Guru Basavanna was the 12th century, the exact years of his lifetime is a subject of debate. Based on the accounts in Vachanas and historical records, most scholars date Guru Basavanna’s lifetime to be from 1134 to 1196 CE. Of the 62 years of this lifetime, it is commonly believed that he spent his childhood in the township of Bagewadi (present-day town of Basava Bagewadi in Bijapur District), moved to Kappadisangama (now Kudalasangama in Bagalkot District) when he was eight and spent his formative years there. It is here that the core percepts of the revolution took shape. Around the year 1155 CE, at the age of 21 years, he is said to have left Kappadisangama for Mangalawade (in Bijapur District). From there, he moved to Kalyana (now Basava Kalyana in Bidar District) around 1160 CE and made it the center of Basavaism until 1196 CE.
While having its roots in Agamic Shaivism, Basavaism blossomed into a novel spiritual practice. Subscribing to the monotheistic concept of universal God, Basavaism is non-dualistic in its approach. However, it does not discount the creation as unreal. Instead, Guru Basavanna showed that the mortal world was the testing ground for souls to achieve the ultimate state of the divine union.
Guru Basavanna introduced a new way of life with divine experience as its center. The message and value of this movement attracted many accomplished yogis and spiritual aspirants. Enabling an environment that fostered and guided aspirants in their spiritual pursuit, Basavanna welcomed everyone with open arms to be part of this movement. Millions of aspirants took advantage of this great opportunity and transformed their lives. Guru Basavanna established Anubhava Mantapa, the Abode of Experience, in the city of Kalyana around the year 1171 CE. Many Sharanas moved to Kalyana and participated in the activities of Anubhava Mantapa. While Kalyana was the center of Sharana society, Sharana community was distributed across the land. Following Basavaism from their own homes, villages, and towns, many aspirants transformed their lives and became integral parts of Sharana community.
Sharana community was an ideal society that had evolved beyond the mortal life of Samsara. The growth of Sharana community alarmed the religious traditionalists. They saw their power structure eroding and sought to destroy the Sharana community. The occasion of the wedding of a Sharana bride (formerly from a Brahmin family) and a Sharana groom (formerly from a Sudra family) became the triggering point for the traditionalists to persecute Sharanas. The events of bloodshed and turmoil that followed came to be known as the Revolution of Kalyana or Kalyana Kranti. Sharanas left Kalyana ending a golden chapter in human history. A Vachana of Guru Basavanna describes this rise and fall of Kalyana:
Guru Basavanna and Sharanas demonstrated that humans can indeed lead an evolved life beyond the confines of the mortal life. Having fulfilled their life missions, Sharanas merged with the Divine. But, before they left this mortal world, they made sure that the glorious spiritual path they treaded were documented in Vachanas. They ensured that this treasure house of divine experience could be accessed and deciphered by sincere aspirants.
Handful of Sharanas, prominent of them being Siddharamayya and Akka Nagalambike, traveled across the land spreading the message and establishing mathas or religious centers. After the 12th century, these mathas propagated part of the messages of Basavaism as the religion Lingayatism. Today, Lingayatism is the leading religion in Karnataka. It is now practiced as a branch of Hinduism without incorporating the spiritual practices of Basavaism. The value and spirit of Basavaism has been lost to the masses without the guidance of Vachanas.
However, the spiritual practices of Basavaism has survived the passage of centuries through a line of saints and mystics. Starting from Shanmukha Shivayogi in the 13th century, handful of spiritual aspirants have been successful in deciphering the messages in Vachanas and adopting them to their lives. We see many saints in this tradition like Malaya Mahadeshwara, Yadiyuru Siddhalingeshwara, Ghanalingideva, Basavalinga Shivayogi, Muppina Shadakshari, Sarvajnya, and Sarpabhushana Shivayogi. These great mystics are like the streaks of lightening illuminating the dark sky for brief moments.
Beginning of the 20th century witnessed the start of resurgence of this great movement thanks to the efforts of several individuals in unearthing and publishing Vachanas. The world is indebted to dedicated souls like F. G. Halakatti, Hardekar Manjappa, and Dr. Pavate for searching and publishing Vachanas. Of the millions of Vachanas documented to have been penned by the 12th century Sharanas, we have about 15,000 available to us today.
Even this small sampling of Vachanas are the blueprints to achieving the divine bliss. This century has to start the work of deciphering the spiritual messages of Vachanas and bring them to practice at a global level.
The philosophy and practices of Basavaism is universal and eternal. While the 12th century witnessed the unfolding of this spiritual path, the precepts of this great mystical tradition seems to have been buried with the passage of time. Guru Basavanna seems to have foreseen this possibility and had the foresight to preserve the concepts in the Vachanas for the future generations. Today, we can get a glimpse of the great mystic tradition in Vachanas. They reflect the eternal concepts based on mystic experiences that are beyond time and space.
We see that even the modern science has not been able to contradict the scientific truths reflected in Vachanas. When the western world was grappling with Earth-centric view of the Universe, we see Sharanas describing the origin of the universe paralleling the modern scientific theory for the origin of universe – the Big Bang. They go afar and even deal with the state beyond the beginning of time and space as we know. When Indian mythology were disseminating a picture of universe permeated with water, Sharanas discussed the process of evolution of Earth and about the prehistoric time when there was no water on the face of the Earth. Their explanation of how water appeared on the Earth goes beyond the most advanced scientific theories of today.
The social revolution of Basavaism remains unparalleled even to this day. While today’s advanced society is struggling with gender, race, caste, religion, and social status discrimination, Sharanas dismissed these as irrelevant and created a society that was beyond such insular notions! Not stopping there, Sharanas extended their compassion to all creatures in this universe. They advocated a lifestyle that was friendly to the society, environment, and the creation.
While the economical system of today is trying to eliminate the exploitation and abuse of the underprivileged, Sharanas in the 12th century created a novel micro-economy that was devoid of exploitation of all kinds. Sharanas went beyond and marginalized the very idea of wealth accumulation being the main goal of life. They demonstrated the feasibility of a society wherein all members could live contently in harmony with the nature and science.
When faiths of today are promoting the ideas that promises happy life in Heaven after suffering and sacrifices here, Sharanas showed the path that makes this life, here and now, a heavenly one. The spiritual path of Sharanas led thousands of people to enjoy divine union while living a fruitful life in the society.
Sharanas’ percepts are truly eternal – valid then, today, and tomorrow. Sharanas have chronicled their insights in the Vachanas. Written in simple language and drawing graphic examples from day-to-day life, Sharanas have conveyed abstract concepts and mystic experiences eloquently in their Vachanas. Vachanas are indeed an endless treasure.
Vachanas, being mystic literature, appear to be ciphered to people not in the spiritual path. An aspirant should learn how to read and interpret Vachanas. Today, Vachanas are popular for their literary value and Vachana literature is considered to be the epitome of Kannada literature. They are the subject of many scholarly researches and object of numerous literary works. They are also popularly used in fine art fields such as music and dance. While it is fine to use Vachanas in these capacities, Sharanas penned Vachanas to guide spiritual aspirants in their lives. This is reflected in many Vachanas of the Sharanas.
A cart needs a hinge pin to secure it’s wheels to the axle. Without this small piece of metal, the entire cart will fall apart. Similarly in this life of ours, we need the Vachanas of Sharanas as the axle hinge pin. Sharana Jedara Dasimayya says that this body of ours is like a cart that is intoxicated with the arrogance of `I’ ness. To make this cart drivable, message of Basavaism reflected in the Vachanas of Sharanas is crucial.
The noble path given by Guru Basavanna enabled many aspirants in the 12th century to attain the highest spiritual heights. This feat of multitudes achieving such spiritual heights together is unrivalled in the history of humanity vouching for the high caliber and uniqueness of this path. Breaking the shackles of religion, scriptures, and traditions, Guru Basavanna gave humanity pioneering concepts on God, creation, cosmology, life, and liberation. These eternal truths are chronicled in Vachanas of the 12th century Sharanas. Diligent study of Vachanas will unfold this eternal truth to sincere aspirants even to this day.
Most people aspire for comfort, happiness and security in their lives. Towards this, most feel that they need to work hard, make and save money so that they can lead a comfortable life in the future. They associate happiness with family, comfort with wealth, and security with property they own. They aspire to accumulate wealth and own property. People get caught-up in the frenzy of achieving this aspiration and toil their entire life in doing so. How rational is this aspiration?
A sparrow builds a nest to raise its young ones. To the sparrow, the nest is its home where it will lay eggs, incubate them, raise the fledglings, and see them fly away. It will then start the process all over again. The sparrow considers the nest to be his and will protect it from any trespassers with fervor.
Where is this nest of the sparrow? A sparrow is known to build its nest in the buildings, barns, and fields. These buildings, barns, and fields are built or farmed by some human being who considers them to be his property. But, the sparrow considers the nest to be his property! Who is the real owner of the nest? From the point of view of a man, he is the owner of the property. He may entertain the sparrow and allow it to build a nest and bring up the little ones. The sparrow is really at the mercy of the man; for, he can destroy the nest at any instant without much effort.
Sharana Chennabasavanna says that man’s life is very similar to that of a sparrow. People have fashioned a complex social system that allows for the ownership of possessions and have instituted legal systems that establishes the ownership of the property. But, how valid is this system?
There once was a landlord who owned a mango grove with hundreds of trees. It was a summer afternoon and the landlord was relaxing in the shade of a tree away from the scorching sun. The trees were full of juicy fruits that were almost ready to be harvested.
He saw a traveler approaching the garden. The tired traveler was extremely thirsty and hungry. Seeing the ripe mangoes hanging from the tree, he was tempted. He looked around and saw the landlord and asked, “I am very hungry and thirsty. It will be very kind of you to let me have a mango.”
The landlord refused to give the traveler even one mango and said, “These are the mangoes that I have grown with great effort. I will not will give them away!”
Just then a flock of birds flew into the garden and started pecking at the mangoes. The landlord tried to scare them away. But, the birds continued to feast on the fruits. The traveler witnessed this and remarked, “Why, these birds do not seem to acknowledge that these are your mangoes! Can’t you tell them that they are yours?”
The landlord could only get mad at the birds, but could so nothing to stop them. The birds feasted on the fruits to their content and flew away. Seeing this, the traveler asked the landlord, “What kind of ownership do you have on this garden? You may say this is all yours. But, even birds do not seem to acknowledge it! How true is your ownership?”.
If we seriously look at the things people consider to be theirs, we will realize that the ownership is merely limited to human social structure. In reality, that ownership does not extend to the objects. Without understanding this, humans spend their entire life struggling to accumulate wealth, gain land, and have family. But, careful reflection will show that none of these really belong to anyone. In this vast creation of God, earth is but a small speck. In this tiny speck, a human being exists but for an instant in the vast timeline of the universe. The land and wealth we think are ours, had scores of other owners in the past, and will have many more in the future. Similarly, our loved ones have had numerous births before and will have many more. So, who is really ours?
Chennabasavanna is bringing this fact to our notice. He is saying that ownership of things and people is faux, just like the sparrow’s ownership of a nest. The true owner of everything is really God! It is ironical that people spend their entire life struggling for land, wealth, and women that they consider as theirs, when they really do not own anything!
It is important to understand that God is the creator and true owner of everything. Just as a man can destroy the nest of a sparrow, everything we have can disappear in no time. God can confer great treasures or utter poverty in an instant. Instead of wasting our lives in the pursuit of land, wealth, and women, we should take refuge in God.
Mind is a crucial part of human beings. It is through this mind that one thinks and functions. It is through this mind that the external world is experienced. Of all the faculties possessed by the humans, mind is the most powerful and it is also the hardest to control. Mind is very fickle in nature and is responsible for the emotional roller coaster that one goes through in daily life. Ironically it is this mind, when calm, that enables one to create wonderful things, discover amazing facts, and even reach the ultimate goal of divine union.
It is through this mind that people fall into the traps of the Samsara! In fact, Samsara manifests as the turbulences of mind resulting from the interactions with the external world. This mind can be a foe, weighing down with the miseries of Samsara and it can also be a friend freeing and leading people towards Divinity. This mind is indeed mysterious! How to make it a friend that can free one from the miseries of Samsara? Many Vachanas of Sharanas unfold the mysteries of mind, detailing its various aspects, intricate nature, and how to render it an ally in the journey towards Divinity. Let us look at couple of Vachanas to understand the role of mind.
In this Vachana, Guru Basavanna depicts the perils associated with the mind and the means of managing it. He uses the analogy of a snake charmer in India carrying live cobra in small baskets to drive home the point. The snake lies inert coiled-up in a closed basket. When the basket is opened, out rushes the cobra, hissing with his hood spread wide, ready to snap and bite. However, under the spell of the enchanting music of the charmer’s pipe, the snake timidly sways to the melody and under the control of the charmer. The snake that is a killer becomes a means of earning bread!
Guru Basavanna compares mind to the snake residing within the basket of the body. Natural tendency of the mind is to move from sense object to sense object dwelling in the material world. Even while sleeping, the mind is restless stealing thoughts from the memory and subconscious! This outward bend of the mind is ever absorbed in the activities never permitting the inward journey towards the God residing deep within.
When an aspirant starts the spiritual journey, it is this mind that creates the bottlenecks. When an aspirant tries to calm and concentrate the mind, out springs a hidden desire or suppressed emotion. Starting from a simple thought, the mind can weave long chains of thoughts completely distracting and disturbing the very process of calming the mind. The irony of this is no one can predict when a thought or emotion would spring and completely consume a person. Nor can one guarantee when a desire will popup and bite. There are many examples of great sages who have fallen into this trap. This churning of mind is a kind of poison that prevents one from turning inwards to the pure source of bliss.
Guru Basavanna prescribes daily veneration of God as the only remedy for this poisonous snake. He further says that this is like the enchantment of a charmer’s pipe that attracts and holds the mind spellbound swaying towards the divine bliss! He proclaims that this act is the only magic that can control the snake that is the mind. This will transform the poisonous snake that binds the being to Samsara to a tool that leads one to liberation. Just as the charmer needs his pipe constantly to control the snake, aspirants need the worship of God every day. It is not sufficient to worship once and expect to enjoy the effect all the time.
This Vachana is an example of Guru Basavanna’s keen observational and analytical skills. Guru Basavanna indeed is a psychologist of extraordinary caliber! As a keen observer of the subtleties of the mind, he gives practical advice and tools to harness the enormous power of inner faculties towards achieving the spiritual goal.
When a fickle mind is transformed into a focused mind, it can be a very powerful asset. Starting with the mind that is immersed in Samsara, Sharanas show how to achieve this transformation. This transformation is the process of Sadhana undertaken in the path given by Guru Basavanna. When the mind undergoes this transformation, it becomes very potent.
In the above Vachana, Guru Basavanna is showing how potent the little mind of a person can become. Using powerful examples he drives home the point that however enormous and colossal a task may seem, one can use the little tools at their disposal to accomplish the task.
When one thinks of a majestic elephant roaming in the forest, the image that appears is that of a powerful animal living at its will. It is the largest land animal with the capacity to uproot tall trees, stampede fields, and bulldoze anything in its way! This mighty beast seems to be completely independent and uncontrollable. Yet, humans have learnt to control and harness this power by using a miniscule tool at his disposal – the goad. This tiny instrument with its sharp edge is all that a mahout needs to control and command the mighty beast. Using the goad, man has turned this mighty power to work for him and even providing for the livelihood. Even though tiny in size, goad is definitely not inconsequential to the elephant that it controls.
When one thinks of the granite hills, rocks, and boulders, the image that is conjured is the hard and unyielding nature of the stone. Stone endures nature and weather over ages and seems completely unchangeable! They appear so solid and unbeatable that it seems to be a daunting task to shape them. Yet, humans have learnt to shape and use them for centuries by using a small tool at their disposal – the chisel. Using this tiny tool, man has tamed mighty boulders and built many monuments, buildings, and structures. Under an expert sculptor, the chisel converts the unyielding boulder into beautiful sculptures and works of art. Chisel is most certainly not insignificant compared to the huge boulder that it shapes.
When one thinks of the pitch darkness, the image that is presented is the gloom and obscurity resulting in blindness. For humans who are used to living in the material world with the constant stimuli and interaction through sense organs, this can be an unsettling experience. One can see no way of controlling and eliminating this obstruction. Yet, humans have learnt to dispel this darkness with a tiny tool at their disposal – the light. A tiny lamp burning in a room will dispel the engulfing darkness instantaneously! Man has mastered the darkness by using lights. A burning lamp emitting light is definitely not irrelevant to the darkness that it dispels.
The ignorance that stands between the Divine and an aspirant seems immense! The Divine light that is ever burning deep within each of us seems to be completely engulfed by this colossal ignorance. Imagine how massive this ignorance must be to hide the bright divine light that is right there within a person, yet he is completely oblivious to it! This ignorance not only hides the true nature, but it also has the capacity to distract, charm, and engage one in worldly activities. It seems powerful like an elephant, solid like a boulder, and blinding like the darkness. This ignorance is certainly immense!
An aspirant turning inwards seeking divine bliss becomes aware of this ignorance that causes one to forget one’s own true nature. The thought of dispelling this ignorance can be very daunting. Guru Basavanna says that one needs to use the powerful inner faculties for this task. Human mind might seem incapable of accomplishing this task, yet this can control, shape, and expel the ignorance enabling the divine vision.
The mind is normally engaged in the external activities associating itself with the sense organs and memory. However, when this mind is disengaged from these activities and calmed through spiritual disciplines, mind can become the means through which divine bliss can be experienced. A mind that is meditating and contemplating on God is by no means trivial. A single pointed mind turned inwards can indeed be a powerful tool and is definitely not inconsequential!
We need to learn to harness the potential of our minds by treading the path given by Guru Basavanna.
ಪ್ರಾಪಂಚಿಕ ಮತ್ತು ಪಾರಮಾರ್ಥಗಳು ಈ ಜಗತ್ತಿನಲ್ಲಿ ಸಮ್ಮಿಳನಗೊಂಡಿವೆ. ಪ್ರಾಪಂಚಿಕ ಜೀವನವನ್ನು ನಡೆಸುವ ವ್ಯಕ್ತಿಗಳ ಗುರಿಯೇ ಬೇರೆ. ಪಾರಮಾರ್ಥಿಕ ಜೀವನವನ್ನು ನಡೆಸುವ ವ್ಯಕ್ತಿಗಳ ಗುರಿಯೇ ಬೇರೆ. ಪ್ರಾಪಂಚಿಕರ ಗುರಿಗಳಲ್ಲಿ ಕೆಲವರದು ತಮ್ಮ ಸಂಸಾರಜೀವನಕ್ಕೆ ಸೀಮಿತವಾಗಿದ್ದರೆ ಮತ್ತೆ ಕೆಲವರದು ಸಮಾಜ ಸೇವೆ, ಧಾರ್ಮಿಕತೆ, ಕೀರ್ತಿ, ಹಣ, ಹೊಸ ವಿಚಾರಗಳು, ಸಂಶೋಧನೆ ಇತ್ಯಾದಿಗಳನ್ನೊಳಗೊಂಡಿರುತ್ತದೆ. ಒಟ್ಟಿನಲ್ಲಿ ಗುರಿಯು ಅವರ ಜೀವಿತದ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಪಾರಮಾರ್ಥಿಕರಲ್ಲಿನ ಗುರಿಗಳು ತಮ್ಮ ಜೀವಿತದ ಅವಧಿಯನ್ನು ಮೀರಿ ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತವೆ.
ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡ ಶರಣರು ಪ್ರಾಪಂಚಿಕ ಜೀವನಕ್ಕೆ ತಿಲಾಂಜಲಿಯನ್ನಿತ್ತು ಜೀವನದ ವಾಸ್ತವಿಕ ಸತ್ಯವನ್ನು ಕಂಡುಕೊಂಡರು. ಈ ಜಗತ್ತಿನಲ್ಲಿ ಆಧ್ಯಾತ್ಮವನ್ನು ಬಿಟ್ಟು ಬೇರೆ ಯಾವುದೇ ವಿಚಾರದಲ್ಲಿ ಎಂತಹ ಹಂತವನ್ನು ಮುಟ್ಟಿದರೂ ಅದು ಕೇವಲ ಜೀವಿತಾವಧಿಗೆ ಸೀಮಿತವಾದುದೆಂದು ಅರಿದ ಅವರು, ಅದನ್ನು ಮೀರಿ ಹೋಗುವ ಉಪಾಯವನ್ನು ಕಂಡುಕೊಂಡರು. ಶರಣರು ಪಾರಮಾರ್ಥಿಕಕ್ಕೆ ಹೋಗುವಲ್ಲಿ ಪ್ರಾಪಂಚಿಕ ವ್ಯಕ್ತಿಯು ಸಹಜವಾಗಿ ಎಲ್ಲಿ ಎಡವುತ್ತಾನೋ ಅದನ್ನು ಗ್ರಹಿಸಿಕೊಂಡು ದಾಟಿ ನಡೆದರು. ಪ್ರಾಪಂಚಿಕತೆಯು ಮನುಷ್ಯನಲ್ಲಿ ಬರುವ ರೀತಿಯನ್ನೂ ಹಾಗೂ ಪಾರಮಾರ್ಥವನ್ನು ಪಡೆಯುವ ವಿಧಾನದ ಬಗ್ಗೆ ಅಲ್ಲಮಪ್ರಭುದೇವರು ಹೇಳುತ್ತಾರೆ,
ಪ್ರಾಪಂಚಿಕತೆಯೆಂಬುದು ಕೇವಲ ಹೊರಗಣ ವಿಷಯಗಳಿಂದ ಕೂಡಿದ ಅಜ್ಞಾನದ ತೊಟ್ಟಿಲಾಗಿದೆ. ಲೌಕಿಕ ವ್ಯಕ್ತಿಯು ತನ್ನ ಮನಸ್ಸನ್ನು ಅಂತರ್ಮುಖ ಮಾಡಿಕೊಂಡು ತನ್ನಂತರಾಳದಲ್ಲಿನ ಅದ್ಭುತ ಜ್ಞಾನವನ್ನು ವಿಕಾಸಮಾಡಿಕೊಳ್ಳದೆ ದೇಹ ಮತ್ತು ಇಂದ್ರಿಯಗಳ ಕಡೆಗೆ ಮನಸ್ಸನ್ನು ಸೀಮಿತಗೊಳಿಸಿ ಕೇವಲ ಹೊರಗಣ ವಿಚಾರಗಳನ್ನೇ ಗ್ರಹಿಸಿಕೊಳ್ಳುತ್ತ ಅಜ್ಞಾನದ ತೊಟ್ಟಿಲನ್ನು ಸೃಷ್ಟಿಸಿಕೊಂಡಿದ್ದಾನೆ. ಮನಸ್ಸನ್ನು ಅಂತರ್ಮುಖ ಮಾಡಿಕೊಳ್ಳದೆ ಬಹಿರ್ಮುಖ ಮಾಡಿಕೊಂಡಿದ್ದಾನೆ. ಹೊರಗಿನ ಜ್ಞಾನಕ್ಕೆ ಒತ್ತುಕೊಡುತ್ತಿದ್ದಾನೆ. ಹಿಂದಿನ ವೇದ ಶಾಸ್ತ್ರ ಆಗಮ ಪುರಾಣಗಳಾಗಲಿ, ಇಂದಿನ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಧಾರ್ಮಿಕತೆ, ಇತ್ಯಾದಿಗಳನ್ನೊಳಗೊಂಡ ಯಾವುದೇ ವಿಚಾರಗಳಾಗಲೀ ಅವು ಆ ತೊಟ್ಟಿಲಿಗೆ ತೂಗುವ ಹಗ್ಗವಾಗಿವೆ. ಅವುಗಳಿಂದ ಒದಗಿದ ಜ್ಞಾನವನ್ನೇ ಪರಿಪೂರ್ಣಜ್ಞಾನವೆಂದು ತಿಳಿದು ಭ್ರಾಂತಿಗೆ ಒಳಗಾಗಿದ್ದಾನೆ. ಅವನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿರುವ ಕಾರಣ ಅವುಗಳ ಜ್ಞಾನವೇ ಅವನಿಗೆ ಜೋಗುಳವಾಗಿ ಮರೆವೆಯೆಂಬ ಗಾಢವಾದ ನಿದ್ರೆಯಲ್ಲಿ ಮೈಮರೆತ್ತಿದ್ದಾನೆ.
ಇದನ್ನು ಒಂದು ದೃಷ್ಟಾಂತದ ಮೂಲಕ ಅರ್ಥೈಸಬಹುದು. ಒಂದು ಮೃಗಾಲಯದಲ್ಲಿ ಒಂದು ಹುಲಿಯನ್ನು ಸುಮಾರು ಒಂದು ಕಿ.ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ಎತ್ತರದ ಬೇಲಿಯನ್ನು ಹಾಕಿ ಬಿಡಲಾಗಿತ್ತು. ಸುಮಾರು ಒಂದು ವರ್ಷ ಅದರಲ್ಲೇ ಆ ಹುಲಿಯ ಜೀವನ ಸಾಗಿತ್ತು. ನಂತರ ಅದರ ಸುತ್ತ ಇರುವ ಬೇಲಿಯನ್ನು ತೆಗೆದು ಎರಡು ಕಿ.ಮೀಟರ್‌ಗೆ ವಿಸ್ತರಿಸಲಾಯಿತ್ತು. ವಿಚಿತ್ರವೆಂದರೆ ಆ ಹುಲಿ ಮೊದಲು ಹಾಕಿದ್ದ ಬೇಲಿಯ ಸೀಮೆಯನ್ನು ದಾಟದೆ ಒಂದು ಕಿ.ಮೀಟರ್ ವ್ಯಾಪ್ತಿಯಲ್ಲೇ ಇರುತ್ತಿತ್ತು. ಅದಕ್ಕೆ ಅಷ್ಟೇ ಜಾಗದಲ್ಲಿ ಓಡಾಡುವ ಅಭ್ಯಾಸವಾಗಿಬಿಟ್ಟಿತ್ತು.
ಆ ಹುಲಿಯಂತೆಯೇ ಮನುಷ್ಯನ ಸ್ಥಿತಿಯೂ ಸಹ. ಅವನು ಧಾರ್ಮಿಕ ಗ್ರಂಥ, ವೈಜ್ಞಾನಿಕ ಸಂಶೋಧನೆ, ಎಂಬಿತ್ಯಾದಿಯಾದ ‘ಸೀಮೆ’ಯಲ್ಲೇ ಜ್ಞಾನವನ್ನು ತಿಳಿದು, ಅದೇ ಶ್ರೇಷ್ಠವೆಂಬ ಬೇಲಿಯನ್ನು ಹಾಕಿಕೊಂಡಿದ್ದಾನೆ. ಹೊಸ ವಿಚಾರ ಬಂದರೂ ಅವುಗಳನ್ನೂ ಹಿಂದಿನದಕ್ಕೇ ಹೋಲಿಸಿ ಸೀಮಿತವನ್ನಾಗಿ ಮಾಡಿಕೊಳ್ಳುತ್ತಿದ್ದಾನೆ.
ಅಲ್ಲಮಪ್ರಭುದೇವರು ಹೇಳುತ್ತಾರೆ, ಎಲ್ಲಿಯವರೆಗೆ ವ್ಯಕ್ತಿಯು ದೇಹ ಮತ್ತು ಇಂದ್ರಿಯಗಳಿಗೆ ಮನಸ್ಸನ್ನು ಹರಿಸಿ, ಹೊರಗಿನ ಜ್ಞಾನ-ವಿಜ್ಞಾನಗಳಲ್ಲಿ ಮುಳುಗಿರುವನೋ, ಎಲ್ಲಿಯವರೆಗೆ ಹೊರಗಿನ ವಿಚಾರಗಳೆಂಬ ಅಜ್ಞಾನದ ತೊಟ್ಟಿಲನ್ನು ಸೃಷ್ಟಿಸಿಕೊಳ್ಳುತ್ತಿರುವನೋ, ಅಲ್ಲಿಯವರೆಗೆ ಅವನಲ್ಲಿ ಅಂತರಂಗದ ಸುಜ್ಞಾನ ನೆಲೆಗೊಳ್ಳದು. ಎಲ್ಲಿಯವರೆಗೆ ಹಿಂದಿನ ವೇದ ಶಾಸ್ತ್ರವೆಂಬ ಹಗ್ಗವನ್ನು ಹರಿಯುವುದಿಲ್ಲವೋ, ವಿಚಾರಗಳೆಂಬ ಜೋಗುಳವನ್ನು ಆಲಿಸುವುದನ್ನು ನಿಲ್ಲಿಸಿ ಅಂತರ್ಮುಖನಾಗಿ ತನ್ನಂತರಂಗದಲ್ಲೇ ಇರುವ ಅದ್ಭುತ ಜ್ಞಾನವನ್ನು ಅರಿಯುವುದಿಲ್ಲವೋ, ಅಲ್ಲಿಯವರೆಗೆ ಅವನು ಪರಿಪೂರ್ಣಜ್ಞಾನಿಯಾಗನು!
ಹೊರಗಿನ ವಿಚಾರಗಳು ಮನುಷ್ಯನನ್ನು ಬಹಿರ್ಮುಖನನ್ನಾಗಿ ಮಾಡುತ್ತವೆ. ಹೊರಗಿನ ಜ್ಞಾನವನ್ನು ಪಡೆದಾಕ್ಷಣ ತಾನು ಬಹಳ ತಿಳಿದೆನೆಂದುಕೊಳ್ಳುತ್ತಾನೆ. ಆದರೆ ನೈಜಜ್ಞಾನವು ಅವನಿಂದ ದೂರವೇ ಉಳಿದಿರುತ್ತದೆ. ಹಲವಾರು ಸಲ ಹೊರಗಿನ ಜ್ಞಾನವನ್ನು ಪಡೆಯುವ ಧಾವತಿಯಲ್ಲಿ ಮನಸ್ಸು ಮತ್ತು ಇಂದ್ರಿಯಗಳ ಸೆಳೆತ ಹಾಗೂ ಅಹಂಕಾರದಿಂದ ಲೌಕಿಕತೆಯಲ್ಲೇ ಮುಳುಗಿಹೋಗುತ್ತಾನೆ. ಆದ್ದರಿಂದ ಜ್ಞಾನಿಯಾಗಬೇಕೆಂಬ ಹಂಬಲವಿರುವ ವ್ಯಕ್ತಿಯು ಮೊದಲು ತನ್ನನ್ನು ತಾನು ಅವಲೋಕಿಸಿಕೊಳ್ಳುತ್ತ ಯಾವ ಚಿಂತನೆಗಳು ಅಂತರಂಗದಲ್ಲಿ ಮೂಡುತ್ತಿವೆ, ಯಾವ ಚಿಂತನೆಗಳು ಬಹಿರಂಗದಿಂದ ಬರುತ್ತಿವೆ ಎಂಬುದನ್ನು ಗುರುತಿಸಬೇಕು. ತಾನು ಸುಜ್ಞಾನಿಯಾಗಲು ತನ್ನಲ್ಲೇ ಅದ್ಭುತವಾದ ಜ್ಞಾನವಿದೆಯೆಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಹೊರಗಿನ ವ್ಯಕ್ತಿಗಳಿಂದಲಾಗಲಿ, ಪುಸ್ತಕಗಳಿಂದಲಾಗಲಿ ಬಂದ ಜ್ಞಾನಕ್ಕಿಂತ ತನ್ನಲ್ಲೇ ಜ್ಞಾನದ ಭಂಡಾರವೇ ಇದೆ ಎಂಬುದನ್ನು ಒಳಹೊಕ್ಕು ನೋಡಬೇಕು. ಯಾವುದೇ ಜ್ಞಾನದ ಮೂಲವು ಅಂತರಂಗದಲ್ಲಿದೆಯೇ ವಿನಹಾ ಬಹಿರಂಗದಲ್ಲಿಲ್ಲ. ಬಹಿರಂಗದಲ್ಲಿ ವಸ್ತುಗಳಿರುತ್ತವೆ. ಆದರೆ ಅದರ ಜ್ಞಾನ ವ್ಯಕ್ತಿಯೊಳಗೇ ಇರುತ್ತದೆ. ವಿಜ್ಞಾನಿಗಳ ಹೊಸ ಆವಿಷ್ಕಾರಗಳು ಅವರಲ್ಲಿ ಹೊರಗಿನಿಂದ ಬರದೆ ಅವರ ಅಂತರಂಗದಿಂದ ಹೊರಹೊಮ್ಮಿರುತ್ತದೆ. ಅದನ್ನೇ ಪ್ರಭುದೇವರು ಹೇಳುತ್ತಾರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ‘ಜ್ಞಾನವೆಂಬ ಶಿಶು’ ಅಡಗಿದೆ ಎಂದು.
ಆದ್ದರಿಂದಲೇ ಆಧ್ಯಾತ್ಮಿಕ ವ್ಯಕ್ತಿಗಳು ಅನುಭಾವಿಗಳಾಗಿರುತ್ತಾರೆ. ಅವರು ಹೊರಗಿನ ವಿಚಾರಗಳಿಗಿಂತ ಅಂತರಂಗದ ಅವಲೋಕನದಲ್ಲಿ ತೊಡಗಿರುತ್ತಾರೆ. ಅಂತರಂಗದಲ್ಲಿ ತಮ್ಮ ಮೂಲ ಶಕ್ತಿಯನ್ನು ಅರಿಯುವಷ್ಟರ ಮಟ್ಟಿಗೆ ಉನ್ನತ ಸ್ಥಿತಿಗೇರಿರುತ್ತಾರೆ. ೧೨ ನೇ ಶತಮಾನದಲ್ಲಿ ಶರಣರು ಅಂತರಂಗವನ್ನು ಹೊಕ್ಕು ಅತ್ಯಂತ ವಿನೂತನವಾದ, ಇತರರಿಗೆ ಅಸಾಧ್ಯವೆನಿಸಿದ ನಿಗೂಢವಾದ ಆಧ್ಯಾತ್ಮವಿಚಾರಗಳನ್ನು ಹೊರತೆಗೆದು ಜಗತ್ತಿಗೆ ನೀಡಿದರು. ಹೀಗೆ ಅವರು ಅನುಭಾವಿಗಳಾದರು. ಯಾರು ಅನುಭಾವಿಗಳೋ, ಯಾರು ತಮ್ಮ ಅಂತರಂಗದಿಂದ ಜ್ಞಾನವನ್ನು ಪಡೆಯಲು ಸಮರ್ಥರಾಗಿರುತ್ತಾರೋ ಅವರು ಜಗತ್ತಿಗೇ ಮಾರ್ಗದರ್ಶನವನ್ನು ಕೊಡುತ್ತಾರೆ. ಉಳಿದವರು ಅದನ್ನು ಅನುಕರಣೆ ಮಾಡುತ್ತಾರೆ, ಇಲ್ಲವೇ ಅದನ್ನೇ ವರ್ಣರಂಜಿತವಾಗಿ ಹೇಳಿ ಕೇವಲ ಬೋಧಕರೆನಿಸುತ್ತಾರೆ.
ಮೊದಲು ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಕೆರೆಯ ದಡದಲ್ಲಿ ನಿಂತು ಬಾಗಿ ನೀರನ್ನು ಬೊಗಸೆಕೈಯಿಂದ ತೆಗೆದುಕೊಳ್ಳಲು ಹೋದನು. ಆದರೆ, ಇವನು ಬಗ್ಗಿದಷ್ಟೂ ನೀರು ಕೈಗೆ ನಿಲುಕಲಾರದೆ ಕೆಳಗೆ ಹೋಯಿತು. ಅದೇ ಸಮಯದಲ್ಲಿ ಮರದ ಹಣ್ಣುಗಳು ಅವನಿಗೆ ಅತಿ ಸಮೀಪ ಬಂದಂತೆ ಕಂಡವು. ಆ ಶಿಷ್ಯನಿಗೆ ಆಶ್ಚರ್ಯವಾಗಿ, ನಿಂತುಕೊಂಡು ಹಣ್ಣನ್ನು ಕೀಳಲು ಕೈ ಚಾಚಿದನು. ಆದರೆ ಮರದ ಕೊಂಬೆಯು ಇವನಿಗೆ ನಿಲುಕಲಾರದಂತೆ ಮೇಲಕ್ಕೆ ಹೋಯಿತು, ಅದೇ ಸಮಯದಲ್ಲಿ ನೀರು ಮೇಲಕ್ಕೆ ಮೊದಲಿನ ಸ್ಥಾನಕ್ಕೆ ಬಂದಿತು. ಮತ್ತೆ ಬಗ್ಗಿ ನೀರು ಕುಡಿಯಲು ಯತ್ನಿಸಿದ, ನೀರು ಮತ್ತೆ ಕೆಳಗೆ ಹೋಯಿತು, ಮರದ ಹಣ್ಣುಗಳು ಕೈಗೆಟಕುವಂತೆ ಹತ್ತಿರ ಬಂದಿತು. ಹೀಗೇ ಆಗುತ್ತಿತ್ತು.
ನೀರನ್ನು ಕಂಡು ಸಂತೋಷವಾಗುತ್ತಿತ್ತು. ಕುಡಿಯಲು ಹೋದರೆ ದೂರವಾಗಿ ಸಂಕಟವಾಗುತ್ತಿತ್ತು. ಆದರೆ ಮರುಕ್ಷಣವೇ ಮಾವಿನ ಹಣ್ಣುಗಳು ಕೈಗೆ ಸಿಗುವಷ್ಟು ಹತ್ತಿರವಾಗುತ್ತಿದ್ದು, ಮತ್ತೆ ಸಂತೋಷವಾಗುತ್ತಿತ್ತು. ಆದರೆ ಎರಡೂ ಅವನಿಗೆ ಲಭಿಸುತ್ತಿರಲಿಲ್ಲ.
ಈ ಆಶ್ಚರ್ಯವನ್ನು ನೋಡುತ್ತ ಕುಳಿತ ಶಿಷ್ಯನಿಗೆ ಹಸಿವು, ಬಾಯಾರಿಕೆ ಎರಡೂ ಬಾಧಿಸತೊಡಗಿದವು. ಎದುರಲ್ಲೇ ನೀರಿದೆ, ಹಣ್ಣುಗಳಿವೆ. ಅವನ್ನು ನೋಡಿದಾಗ ಸಿಗುವ ಭರವಸೆಯಿದೆ. ಭರವಸೆ ಸುಖವನ್ನು ತಂದುಕೊಟ್ಟಿದೆ. ಆದರೆ ವಾಸ್ತವವಾU ಅದು ಸಿಗುತ್ತಿಲ್ಲ. ಮತ್ತೆ ಮತ್ತೆ ಪ್ರಯತ್ನ ಪಟ್ಟ. ಎಷ್ಟು ಪ್ರಯತ್ನಿಸಿದರೂ ಅವು ಅವನಿಗೆ ಸಿಗಲಿಲ್ಲ. ನೋಡಿದಾಗ ಸಂತೋಷವಾಗುತ್ತಿತ್ತು. ಸಿಗದೆ ದುಃಖವಾಗುತ್ತಿತ್ತು.
ಅಷ್ಟರಲ್ಲಿ ಅವನಿಗೆ ಗೊತ್ತಾಗದಂತೆ ಅವನನ್ನು ಹಿಂಬಾಲಿಸಿ ಬಂದಿದ್ದ ಗುರುಗಳು ತಾವು ತಂದಿದ್ದ ಹಣ್ಣು, ನೀರನ್ನು ಕೊಟ್ಟು ಸಮಾಧಾನಪಡಿಸಿ ಕೇಳಿದರು ‘ಸುಖ ದುಃಖ ಹೇಗಿರುತ್ತದೆ ಅನುಭವವಾಯಿತೇ’ ಎಂದು!
ಸಂಸಾರದ ಸುಖ ಇದೇ ರೀತಿಯಲ್ಲಿರುವುದು. ಸಂಸಾರದಲ್ಲಿ ಸುಖವಿದೆ ಎಂದು ಮನುಷ್ಯನು ಅದರಲ್ಲಿ ಸಿಲುಕಿ ಸುಖವನ್ನು ಅರಸುತ್ತಿದ್ದಾನೆ. ಅದು ಸಿಕ್ಕಿತು ಎಂದು ಅನುಭವಿಸುವಷ್ಟರಲ್ಲಿ ಅದು ನುಣುಚಿಕೊಂಡಿರುತ್ತದೆ, ಮರುಕ್ಷಣವೇ ಮತ್ತೊಂದು ವಿಷಯವಸ್ತುವಿನ ಮೇಲೆ ವ್ಯಕ್ತಿಯ ಮನಸ್ಸು ಹರಿದು ಅಲ್ಲಿ ಸುಖ ಸಿಗಬಹುದೆಂದು ಹೋರಾಟ ಮಾಡುತ್ತಿರುತ್ತಾನೆ. ಹೀಗೆ ಒಂದಾದ ಮೇಲೆ ಒಂದರಂತೆ ಅವನ ಜೀವನ ಪೂರ್ತಿ ಪ್ರಯತ್ನವೇ ನಡೆದಿರುತ್ತದೆ.
ಆದ್ದರಿಂದಲೇ ಇಂತಹ ಜೀವನವನ್ನು ಮೀರಿ ಅದಕ್ಕಿಂತ ಮಿಗಿಲಾದುದನ್ನು ಕಂಡುಕೊಳ್ಳಲು ದೇವನ ಮೊರೆಹೋಗುವಂತೆ ಸೂಚಿಸುತ್ತಾರೆ ಗುರುಬಸವಣ್ಣನವರು. ಅದಕ್ಕಾಗಿಯೇ ಅವರು ಹೇಳುತ್ತಾರೆ,
ಜೀವನವು ಹೇಗಿದೆ, ತಾನು ಯಾವುದಕ್ಕೆ ಶ್ರಮವನ್ನು ಪಡುತ್ತಿದ್ದೇನೆ? ಇದಕ್ಕಿಂತ ಉನ್ನತವಾದುದು ಇದೆಯೇ ಎಂದು ವ್ಯಕ್ತಿಯು ಒಮ್ಮೆಯೂ ಅಂತರಾವಲೋಕನ ಮಾಡಿಕೊಳ್ಳನು. ಕೇವಲ ಯಾಂತ್ರಿಕವಾಗಿ ಜೀವನ ನಡೆಸುವನು. ಬಾಳುವೆಣನವೆಂದರೆ ಅಂಬಿಗನಿಲ್ಲದೆ, ಹುಟ್ಟುಗೋಲಿಲ್ಲದೆ ದೋಣಿಯಲ್ಲಿ ಕುಳಿತು, ತಾನು ಏನೂ ಪ್ರಯತ್ನಪಡದೆ ಬಿರುಗಾಳಿ ಬಂದಾಗ ಅದು ಎಲ್ಲಿಗೆ ಕರೆದೊಯ್ಯುವುದೋ ಅಲ್ಲಿಗೆ ಸಾಗುವವನ ಬಾಳು! ಅದು ಹೆಣನ ಬಾಳಿನಂತೆ. ಸ್ವಂತಿಕೆಯಿಂದ ತನ್ನ ಅಮೂಲ್ಯವಾದ ಜೀವನದ ಬಗ್ಗೆ ಚಿಂತನೆ ಮಾಡದವನು, ನಿಗೂಢವಾದ ಜಗತ್ತನ್ನು ಅರಿಯದವನು, ಪರಮಾತ್ಮನ ಅರಿವಿಲ್ಲದವನು ನಡೆವ ಹೆಣ, ನುಡಿವ ಹೆಣದಂತೆ. ವ್ಯಕ್ತಿಯ ಜೀವನವು ಸಾವಿರಾರು ವರ್ಷಗಳ ಜೀವನವಲ್ಲ, ಬಹಳ ಅಲ್ಪವಾದುದು. ಇರುವ ಅಲ್ಪಕಾಲದಲ್ಲಿ ಜೀವನವನ್ನು ಶಿಸ್ತಿನಿಂದ ನಡೆಸಬೇಕು, ಪ್ರತಿನಿತ್ಯ ದೇವನ ನೆನಹಿನಲ್ಲಿರಬೇಕು, ಜೀವನದಲ್ಲಿ ಪರಮಾತ್ಮನು ಹಾಸುಹೊಕ್ಕಾಗಿರುವಂತೆ ಮಾಡಿಕೊಳ್ಳಬೇಕು ಎಂದು ಗುರುಬಸವಣ್ಣನವರು ಈ ವಚನದಲ್ಲಿ ಸ್ಪಷ್ಟಪಡಿಸುತ್ತಾರೆ.
ಸಂಸಾರ ಬಂಧನಕ್ಕೆ ಬಂದಮೇಲೆ ನಿನ್ನ ಅಂತರಾತ್ಮ ಮೆಚ್ಚುವಂತೆ ಕಾರ್ಯವನ್ನು ಮಾಡು. ಮಾಡುವ ಕಾರ್ಯವು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದು ಮುಖ್ಯವಲ್ಲ ಆದರೆ ಸತ್ಯಶುದ್ಧವಾಗಿರಲಿ! ಪರಮಾತ್ಮನು ನೋಡುವುದು ಸಚ್ಛಾರಿತ್ರ್ಯವಾದ ಕಾರ್ಯವನ್ನೇ ಹೊರತು ಜನಮೆಚ್ಚಿಸುವಂತಹ ಕಾರ್ಯವನ್ನಲ್ಲ ಎಂಬ ತಿಳುವಳಿಕೆಯನ್ನೂ ಸಹ ಗುರುಬಸವಣ್ಣನವರು ಈ ವಚನದ ಮೂಲಕ ಹೇಳುತ್ತಿದ್ದಾರೆ.
ಆದ್ದರಿಂದ ದೇಹವು ಕ್ಷೀಣವಾಗುವುದರೊಳಗಾಗಿ, ಅನೇಕ ಖಾಯಿಲೆಗಳಿಗೆ ಒಳಗಾಗುವುದರೊಳಗಾಗಿ, ಮುಪ್ಪಿನಾವಸ್ಥೆಯನ್ನು ಹೊಂದುವುದರೊಳಗಾಗಿ, ಶಕ್ತಿ ಕುಂದುವುದರೊಳಗಾಗಿ ಜೀವನವನ್ನು ಅರ್ಥಮಾಡಿಕೊಂಡು ದೇವನನ್ನು ಒಲಿಸುವ ಕಾರ್ಯವನ್ನು ಮಾಡಬೇಕು. ಕಡೆಗೆ ಸಾವಿನ ಸಮಯದಲ್ಲಿ ಆಧ್ಯಾತ್ಮಪಥಕ್ಕೆ ಬರುವೆನೆಂದರೆ, ಪರಮಾತ್ಮನನ್ನು ಮೆಚ್ಚಿಸುವೆನೆಂದರೆ, ಮನೆಗೆ ಬೆಂಕಿಬಿದ್ದು ಉರಿಯುತ್ತಿರುವಾಗ ಬಾವಿ ತೋಡಿದಂತೆ ವ್ಯರ್ಥಪ್ರಯತ್ನವಾದೀತೆ ವಿನಹಾ ಪ್ರಯೋಜನವಾಗದು. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರವಾಗಿ ಚೈತನ್ಯಶಾಲಿಗಳಾಗಿ ದೇವನನ್ನು ಒಲಿಸುವಂತಹ ಬಾಳನ್ನು ನಡೆಸಬೇಕು.
‘ನಿಮ್ಮನ್ನು ದೇವನೆಡೆಗೆ ಕರೆದೊಯ್ಯುವುದು ನನ್ನ ಹೊಣೆ’ -ಹೀಗೆ ನುಡಿದವರು ಗುರುಬಸವಣ್ಣನವರು. ಪರಮಾತ್ಮನೆಡೆಗೆ ಕರೆದುಕೊಂಡು ಹೋಗುವುದು ನನ್ನ ಜವಾಬ್ದಾರಿ ಎಂದು ಅವರು ಪೂರ್ಣ ಆಶ್ವಾಸನೆಯನ್ನು ಕೊಡುತ್ತಾರೆ.
ದೇವನನ್ನು ಪಡೆಯಬೇಕೆಂಬ ಹಂಬಲ ಮುಮುಕ್ಷುಗಳಲ್ಲಿರುತ್ತದೆ ನಿಜ! ಅದಕ್ಕಾಗಿ ಅನೇಕ ಜನ ಮುಮುಕ್ಷುಗಳು ಪರಿತಪಿಸುತ್ತಿರುತ್ತಾರೆ. ಅವನನ್ನು ಪಡೆಯುವ ಹಂಬಲದಲ್ಲಿ ನಾನಾ ರೀತಿಯ ಪೂಜೆ ಧ್ಯಾನ ಜಪ ತಪಗಳನ್ನು ಮಾಡುತ್ತಿರುತ್ತಾರೆ. ಕೆಲವರು ದೇವನ ನೆಲೆಕಲೆಗಳನ್ನು ಅರಿಯದೆ ಹಲವಾರು ದೇವತೆಗಳನ್ನು ಪೂಜಿಸುತ್ತಿರುತ್ತಾರೆ, ನೂರಾರು ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ. ಮತ್ತೆ ಕೆಲವರು ಬೆಟ್ಟ ಗುಡ್ಡಗಳಲ್ಲಿ ಧ್ಯಾನ ತಪಸ್ಸನ್ನು ಆಚರಿಸುತ್ತಿರುತ್ತಾರೆ. ಆದರೆ ಸಾಧನೆಯಲ್ಲಿ ಪರಿಪೂರ್ಣತೆ ಸಿಗದೆ ಪರಿತಪಿಸುತ್ತಿರುತ್ತಾರೆ.
ದೇವನನ್ನು ಕಾಣಲು ನಾನಾರೀತಿಯ ಮಾರ್ಗಗಳನ್ನು ಅನೇಕ ಧರ್ಮಗಳು, ಪಂಥಗಳು, ಮತಗಳು ಬೋಧಿಸುತ್ತಿವೆ. ಕೆಲವು ಧರ್ಮಗಳಲ್ಲಿ ದೇವನ ಅಸ್ತಿತ್ವವೇ ಇರದು. ‘ ಪ್ರಕೃತಿಯ ಬಂಧನದಿಂದ ಬಿಡುಗಡೆ ’ ಇದು ಆ ಧರ್ಮಗಳ ಗುರಿ. ಕೆಲವು ಧರ್ಮಗಳು ಆಂತರಿಕ ವಿಕಾಸವನ್ನೇ ಹೇಳುವುದಿಲ್ಲ. ಅಲ್ಲಿ ಧರ್ಮ ಸಂಘಟನೆ, ಬಾಹ್ಯ ಸಂಸ್ಕಾರ, ಮತ್ತು ಧಾರ್ಮಿಕ ಆಚರಣೆಗಳಿಗೆ ಒತ್ತುಕೊಡುತ್ತಾರೆ. ಪೂಜೆಯೇ ಇಲ್ಲದ ಧರ್ಮವೂ ಸಹ ಇದ್ದು ಅಲ್ಲಿಯೂ ಸಹ ಧರ್ಮಸಂಘಟನೆ, ಧಾರ್ಮಿಕ ಚಟುವಟಿಕೆಗೆ ಹೆಚ್ಚು ಗಮನವಿದೆಯೇ ಹೊರತು ತನ್ನಂತರಂಗವನ್ನು ಒಳಹೊಕ್ಕು ದೇವನ ಅರಿವನ್ನು ಪಡೆಯುವ ಜ್ಞಾನವಿಲ್ಲ. ಮತ್ತೆ ಕೆಲವು ಧರ್ಮಗಳಲ್ಲಿ ವಿಪರೀತವಾಗಿ ಬಾಹ್ಯವಾದ ಧಾರ್ಮಿಕ ಆಚರಣೆಗಳು ತುಂಬಿಹೋಗಿ ಸಾಧಕರಿಗೆ ಸ್ವತಂತ್ರವಾಗಿ ಆಲೋಚನೆಯನ್ನು ಮಾಡಲು ಸಹ ಅವಕಾಶವಿರದು. ಕೆಲವು ಮತಗಳಲ್ಲಿ ಅತ್ಯಂತ ಕ್ಲಿಷ್ಟವಾದ ತತ್ತ್ವಜ್ಞಾನವಿದ್ದು ಅದನ್ನು ಆಚರಣೆಗೆ ತರುವುದು ಸಾಧಕರಿಗೆ ಕಷ್ಟಸಾಧ್ಯ. ಅಲ್ಲಿ ಕೇವಲ ಪಾಂಡಿತ್ಯ, ವಿಚಾರಶೀಲತೆಯನ್ನು ಬೆಳಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆಯೇ ಹೊರತು ಅಳವಡಿಕೆ ಕಷ್ಟ.
ಇಂತಹ ಸನ್ನಿವೇಶದಲ್ಲಿ ಪರಮಾತ್ಮನ ಹಂಬಲವುಳ್ಳ ಸಾಧಕನಿಗೆ ಗೊಂದಲವಾಗುವುದು ಸಹಜ. ಅವನು ಒಂದರಲ್ಲಿಯೂ ಪರಿಪೂರ್ಣತೆ ಸಿಗದೆ ಹಲವಾರು ಧರ್ಮ, ಮತ, ಪಂಥ, ತತ್ತ್ವಜ್ಞಾನ ಇತ್ಯಾದಿಯಾಗಿ ಅರಸುತ್ತಿರುತ್ತಾನೆ. ಕೆಲವೊಮ್ಮೆ ಆಧ್ಯಯನದಲ್ಲಿ ತೊಡಗಿದರೆ, ದಟ್ಟವಾದ ಕಾಡನ್ನು ಹೊಕ್ಕು ಹೊರಬರಲಾರದೆ ಪರಿತಪಿಸುವಂತಾಗುತ್ತದೆ. ಇಂತಹ ಸಾಧಕರಿಗೆ ಗುರುಬಸವಣ್ಣನವರು ಅಭಯವನ್ನು ಕೊಟ್ಟು ಹೇಳುತ್ತಾರೆ,
ಹಲವು ಕೊಂಬಿಂಗೆ ಹಾಯಲು ಬೇಡ,
ಆಧ್ಯಾತ್ಮಿಕ ಹಂಬಲವುಳ್ಳ ಮುಮುಕ್ಷುಗಳು ದೇವನ ಕಾರುಣ್ಯವನ್ನು ಪಡೆಯಲು ಸರಿಯಾದ ಮಾರ್ಗದರ್ಶನವಿಲ್ಲದೆ ಹೊಯ್ದಾಡುವಾಗ, ೧೨ನೇ ಶತಮಾನದಲ್ಲಿ ಸಾವಿರಾರು ಸಾಧಕರನ್ನು ಸಿದ್ಧಪುರುಷರನ್ನಾಗಿ ಮಾಡಿದ ಮಹಾಗುರು ಬಸವಣ್ಣನವರು ಎಲ್ಲರಿಗೂ ಸಾಧನೆಯ ಮಾರ್ಗವನ್ನು ಬೋಧಿಸಿದರು. ಅದಕ್ಕಾಗಿಯೇ ಅವರು, ‘ಬೇರೆ ಬೇರೆ ಸಾಧನಾ ಮಾರ್ಗ, ಯೋಗ, ಅಧ್ಯಯನಗಳೆಂಬ ಹಲವು ಕೊಂಬೆಗಳಿಗೆ ಹಾಯಬೇಡಿ. ಅವುಗಳಿಂದ ಮಾನಸಿಕ ತೃಪ್ತಿಯೆಂಬ ಕಾಯಿ ಸಿಗಬಹುದೇ ವಿನಹಾ ನಿಷ್ಪತ್ತಿಯೆಂಬ ಪರಿಪೂರ್ಣ ಹಣ್ಣು ಸಿಗದು. ಧಾರ್ಮಿಕತೆಯ ಸೋಗಿನಲ್ಲಿ ಹೊಟ್ಟೆಹೊರೆಯುವುದು, ಆಸ್ತಿ ಬೆಳೆಸುವುದು, ಕೀರ್ತಿ ಅಂತಸ್ತಿಗೆ ಹಂಬಲಿಸುವುದು ಇತ್ಯಾದಿಗಳಿಗೆ ಎಡೆಗೊಡಬೇಡಿ. ದೇವನ ನೆಲೆಕಲೆಗಳನ್ನು ಅರ್ಥಮಾಡಿಕೊಳ್ಳದ, ಶರಣ ಮಾರ್ಗದಲ್ಲಿರದ ಲೌಕಿಕ ವ್ಯಕ್ತಿಗಳ ವಿಚಾರಕ್ಕೆ, ಅವರುಗಳ ತರ್ಕಕ್ಕೆ ತಲೆದೂಗಿ ಭ್ರಮೆಗೊಳಗಾಗದಿರಿ’ ಎಂದು ಎಚ್ಚರಿಸುತ್ತಾರೆ.
ಪರಮಾತ್ಮನನ್ನು ಕಾಣಲು ಕೇವಲ ಭಕ್ತಿ-ಜ್ಞಾನವಿದ್ದರಷ್ಟೇ ಸಾಲದು. ಆಚಾರವು ಬಹಳ ಮುಖ್ಯ. ಜೀವನದಲ್ಲಿ ವ್ಯಕ್ತಿಯ ನಡೆ ಶುದ್ಧವಾಗಿದ್ದರೆ ಅದು ಸಾಧನಾ ಮಾರ್ಗದ ಸೋಪಾನವಿದ್ದಂತೆ. ಆಚಾರವು ತಪ್ಪಿದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ. ನುಡಿಯಲು ಬಾರದು, ನಡೆಯಲು ಬಾರದು, ಲಿಂಗದೇವನೆ ದಿಬ್ಯವೊ ಅಯ್ಯಾ. ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ ಕಡೆದಾಂಟದು ಕಾಣಾ, ಕೂಡಲಸಂಗಮದೇವಾ’ ಎನ್ನುವಂತೆ, ಪರಮಾತ್ಮನನ್ನು ಹಂಬಲಿಸುವವರು ಮೊದಲು ಸದಾಚಾರವನ್ನು ಅಳವಡಿಸಿಕೊಳ್ಳಬೇಕು ಎಂದು ಸಾಧನೆಯ ಮೊದಲ ಹಂತವನ್ನು ಗುರುಬಸವಣ್ಣನವರು ಬೋಧಿಸುತ್ತಾರೆ. ಅವರು ಹೇಳುತ್ತಾರೆ, ಆಚಾರವೆಂಬುದು ಹಾವಸೆಗಲ್ಲಿದ್ದಂತೆ , ಪಾಚಿಕಟ್ಟಿದ ಕಲ್ಲಿನ ಮೇಲೆ ನಡೆಯಬೇಕಾದರೆ ಅತಿ ಎಚ್ಚರ ಅವಶ್ಯಕ.
ಆಚಾರದಲ್ಲಿ ತಪ್ಪಿ ಜಾರಿ ಬಿದ್ದಲ್ಲಿ ಅಧೋಗತಿಗೆ ಹೋಗುವುದು ಖಂಡಿತ. ಆಚಾರದಲ್ಲಿ ಲೋಪವಾಗಿ, ಭಕ್ತಿ-ಜ್ಞಾನವಿದ್ದರೂ ದೇವನು ಒಲಿಯನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳುತ್ತಾರೆ.
ಸಾಧಕನಿಗೆ ಪರಮಾತ್ಮನನ್ನು ಒಲಿಸಲು ಕಷ್ಟವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ ಅವನು ದೇವನ ಸ್ವರೂಪವನ್ನು ಅರ್ಥಮಾಡಿಕೊಳ್ಳದಿರುವುದು. ಇರುವ ಒಬ್ಬನೇ ದೇವನನ್ನು ಪೂಜಿಸಿ, ಧ್ಯಾನಿಸದೆ, ಹಲವಾರು ಪುರಾಣಗಳನ್ನು ಓದಿ ನೂರಾರು ದೇವತೆಗಳನ್ನು ದೇವರೆಂದು ಭಾವಿಸಿ ಗೊಂದಲಮಾಡಿಕೊಂಡಿದ್ದಾನೆ. ಹಣಕ್ಕಾಗಿ ಒಬ್ಬರು, ಜ್ಞಾನಕ್ಕಾಗಿ ಒಬ್ಬರು, ಸಮಸ್ಯೆಗಳು ಬಂದಾಗ ಒಬ್ಬರು ಹೀಗೆ ಅನೇಕ ಕಾಲ್ಪನಿಕ ದೇವತೆಗಳನ್ನು ಪೂಜಿಸುತ್ತ ಅಜ್ಞಾನದಲ್ಲಿ ಮುಳುಗಿದ್ದಾನೆ.
ಗುರುಬಸವಣ್ಣನವರು ಹೇಳುತ್ತಾರೆ, ಪರಮಾತ್ಮನು ಒಬ್ಬನೇ. ಅವನೇ ಬ್ರಹ್ಮಾಂಡದ ಸೃಷ್ಟಿಕರ್ತ, ಅವನೇ ಸಕಲ ಜೀವರಾಶಿಯ ಕರ್ತ. ಜಗತ್ತನ್ನು ನಿಯಂತ್ರಿಸುವವನೂ ಅವನೇ, ಎಲ್ಲ ಹುಟ್ಟು ಸಾವುಗಳಿಗೆ ಕಾರಣೀಭೂತನಾಗಿರುವವನೂ ಅವನೇ. ಪ್ರತಿ ಜೀವರಾಶಿಯ ಕರ್ಮ ಫಲಗಳನ್ನು ನೀಡುವವನೂ ಅವನೇ, ಕರ್ಮಾಧ್ಯಕ್ಷನೂ ಅವನೇ. ಸಕಲ ಜೀವರಾಶಿಯ ದುಃಖವನ್ನು ಪರಿಹರಿಸುವವನೂ ಅವನೇ. ಇದನ್ನು ಅರಿತು ದೃಢವಾದ ನಂಬಿಕೆಯಿಂದ ಅವನನ್ನು ಪೂಜಿಸು. ಅವನು ಸರ್ವರನ್ನೂ ರಕ್ಷಿಸುತ್ತಾನೆ ಎಂಬ ನಂಬಿಕೆಯನ್ನು ಆಳವಾಗಿ ಬೇರೂರಿಸಿಕೋ. ನಿನ್ನ ಭಕ್ತಿಯನ್ನು ಆ ಒಬ್ಬನೇ ಪರಮಾತ್ಮನಲ್ಲಿ ಕೇಂದ್ರೀಕರಿಸಿ ಪೂಜೆ ಧ್ಯಾನಾದಿಗಳನ್ನು ಮಾಡು. ಬೇರೆ ದೇವತೆಗಳ ಪೂಜೆಯನ್ನು ಬಿಡುವಲ್ಲಿ ಭಯ ಪಡದಿರು. ನಿನ್ನಲ್ಲಿ ಭಕ್ತಿ-ಜ್ಞಾನವನ್ನು ಪೋಷಿಸಿಕೊಂಡು, ಏಕದೇವನಿಷ್ಠನಾಗಿ ಆಚಾರವನ್ನು ಶುದ್ಧಗೊಳಿಸಿಕೊಂಡೆಯಾದರೆ ಪರಮಾತ್ಮನಲ್ಲಿಗೆ ನಿನ್ನನ್ನು ಸೇರಿಸುವ ಜವಾಬ್ದಾರಿ ನನ್ನದು ಎಂದು ಅಭಯವನ್ನು, ಆಶ್ವಾಸನೆಯನ್ನು ಗುರುಬಸವಣ್ಣನವರು ಈ ವಚನದ ಮೂಲಕ ಕೊಡುತ್ತಿದ್ದಾರೆ. ಆದ್ದರಿಂದ ಗುರುಬಸವಣ್ಣನವರಲ್ಲಿ ಪೂರ್ಣ ನಂಬಿಕೆಯನ್ನಿಟ್ಟು, ಅವರು ತೋರಿದ ಸಾಧನಾ ಪಥದಲ್ಲಿ ಸಾಗಿದರೆ ಅವರೇ ನಮ್ಮನ್ನು ಪರಮಾತ್ಮನಲ್ಲಿಗೆ ಕರೆದೊಯ್ಯುವುದರಿಂದ ಅವರಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದೋಣ.
ಆತ ಓರ್ವ ಮುಂಬೈನಲ್ಲಿ ವಾಯುಪಡೆಯ ವೈದ್ಯ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಹೋಗಲು ಟಿಕೆಟ್ ಕಾಯ್ದಿರಿಸಿದ್ದ. ಸಂಜೆ ೭ ಗಂಟೆಗೆ ವಿಮಾನವು ಹೊರಡಬೇಕಿತ್ತು. ಆದರೆ ಆತ ವಿಮಾನ ನಿಲ್ದಾಣಕ್ಕೆ ಬರುವುದು ತಡವಾಯಿತು. ಆ ವ್ಯಕ್ತಿಯು ತಡವಾಗಿ ಬಂದಿದ್ದರಿಂದ, ಮತ್ತು ವಿಮಾನವು ಹೊರಡಲು ಅಂತಿಮ ಕ್ಷಣದಲ್ಲಿದ್ದುದರಿಂದ ವಿಮಾನದ ಸಿಬ್ಬಂದಿಯು ಅವನನ್ನು ಒಳಗೆ ಹೋಗಲು ಅವಕಾಶವನ್ನು ನೀಡಲಿಲ್ಲ. ಇದು ಆತನ ಕೋಪಕ್ಕೆ ಕಾರಣವಾಯಿತು. ಆತ ಎಷ್ಟೇ ಕೇಳಿಕೊಂಡರೂ, ಕೋಪತಾಪದಿಂದ ವಾದಮಾಡಿದರೂ ವಿಮಾನ ಸಿಬ್ಬಂದಿಯು ನಿಯಮವನ್ನು ಸಡಿಲಗೊಳಿಸಲಿಲ್ಲ. ಆತನ ಕೋಪ ಇನ್ನಷ್ಟು ವಿಕೋಪಕ್ಕೆ ಹೋಯಿತು. ಮುಖ್ಯ ಪೈಲಟ್‌ಗೆ ದೂರು ಕೊಡುವೆನೆಂದು ಅವರ ಮೊಬೈಲ್ ನಂಬರ್ ತೆಗೆದುಕೊಂಡು ಅವರಿಗೆ ಪೋನ್ ಮಾಡಿ ‘ ವಿಮಾನದಲ್ಲಿ ಬಾಂಬ್ ಇಡಲಾಗಿದೆ, ಅದು ಸ್ವಲ್ಪ ಹೊತ್ತಿನಲ್ಲೇ ಸ್ಪೋಟಗೊಳ್ಳುವುದೆಂದು ಹೇಳಿದ’. ಹೊರಟಿದ್ದ ವಿಮಾನ ನಿಂತಿತು. ಪ್ರಯಾಣಿಕರೆಲ್ಲ ಗಾಬರಿಯಿಂದ ಇಳಿದರು. ಪೋಲೀಸ್ ಸಿಬ್ಬಂದಿ ತಕ್ಷಣ ಬಾಂಬ್ ತಪಾಸಣೆ ಮಾಡಿದರು. ಆದರೆ ಯಾವುದೇ ಬಾಂಬ್ ಸಿಗಲಿಲ್ಲ. ತಕ್ಷಣ ತನಿಖೆ ನಡೆದು ಫೋನ್ ಕರೆಯನ್ನು ಗುರುತಿಸಿ ವೈದ್ಯನನ್ನು ಹಿಡಿಯಲಾಯಿತು. ಇದಕ್ಕೆ ಕಾರಣನಾದ ಆ ವೈದ್ಯನು ಪೋಲೀಸ್ ಅತಿಥಿಯಾದ!
ಕೋಪದಿಂದ ಎಂತಹ ಅನಾಹುತಗಳಿಗೆ ವ್ಯಕ್ತಿಯು ಒಳಗಾಗುತ್ತಾನೆಂಬುದಕ್ಕೆ ಇದೊಂದು ನಿದರ್ಶನ. ಕೋಪವೆಂಬುದು ಮನುಷ್ಯನ ಹುಟ್ಟುಗುಣವಾಗಿದ್ದು ಅದನ್ನು ಎಚ್ಚರದಿಂದ ತನ್ನ ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಅದರಿಂದಾಗುವ ಅನಾಹುತಗಳು ಅಪಾರ. ಶರಣರು ಕೋಪವು ಮನುಷ್ಯನಲ್ಲಿ ಹುಟ್ಟಲು ಕಾರಣವನ್ನು ಹೇಳಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಲೆಯನ್ನು ತಮ್ಮ ವಚನಗಳ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಗುರುಬಸವಣ್ಣನವರು ‘ತನುವಿನ ಕೋಪ ತನ್ನ ಹಿರಿಯತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು’ ಎಂದು ಹೇಳಿದಂತೆ, ಆ ವೈದ್ಯನ ಮನಸ್ಸಿನಲ್ಲಿನ ಕೋಪ ಅವನ ಅರಿವನ್ನೇ ಕೆಡಿಸಿತು. ‘ಕೋಪವಿದ್ದಲ್ಲಿ ಅರಿವಿರದು, ಅರಿವಿದ್ದಲ್ಲಿ ಕೋಪಬಾರದು’ ಎಂಬ ಅವರ ವಚನ ಬೋಧೆಯಂತೆ, ಅವನಲ್ಲಿನ ಕೋಪ ವಿಕೋಪಕ್ಕೆ ಹೋಗಿದ್ದರಿಂದ ಅರಿವು ಶೂನ್ಯವಾಗಿ ಅಜ್ಞಾನಿಯಾಗಿ ತಾನು ಏನು ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ‘ಬಾಂಬ್ ಇಡಲಾಗಿದೆ’ ಎಂದು ಫೋನ್ ಮಾಡಿ, ಗಂಡಾಂತರ ತಂದುಕೊಂಡ. ಅಲ್ಲದೆ ತಾನೊಬ್ಬ ವೈದ್ಯನಾಗಿ ಇಂತಹ ಕೃತ್ಯವನ್ನು ಎಸೆಗಿದ್ದಕ್ಕೆ ವ್ಯಕ್ತಿತ್ವ-ಗೌರವ ಎರಡನ್ನೂ ಕಳೆದುಕೊಂಡ. ತಾನೂ ತೊಂದರೆ ಮಾಡಿಕೊಂಡಿದ್ದಲ್ಲದೆ ವಿಮಾನ ನಿಲ್ದಾಣ ಸಿಬ್ಬಂದಿಗೆ, ಪೋಲೀಸರಿಗೆ, ಪ್ರಯಾಣಿಕರಿಗೂ ಸಹ ತೊಂದರೆಯನ್ನು ಉಂಟುಮಾಡಿದ.
ಕೋಪ ಬರುವುದಕ್ಕೆ ಮೂಲ ಕಾರಣವನ್ನು ತಮ್ಮ ವಚನದಲ್ಲಿ ಅಕ್ಕಮಹಾದೇವಿಯವರು ಹೇಳುತ್ತಾರೆ, ‘ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು. ಸಂಸಾರಹುಟ್ಟಿದಲ್ಲಿ ಅಜ್ಞಾನಹುಟ್ಟಿತ್ತು. ಅಜ್ಞಾನಹುಟ್ಟಿದಲ್ಲಿ ಆಸೆಹುಟ್ಟಿತ್ತು, ಆಸೆಹುಟ್ಟಿದಲ್ಲಿ ಕೋಪಹುಟ್ಟಿತ್ತು’ ಎಂದು. ಅಹಂಕಾರವೇ ಕೋಪದ ಮೂಲ ಕಾರಣಎಂದು ಹೇಳುವ ಅವರು ಅಹಂಕಾರದಿಂದ ಮಾನಸಿಕ ಗೊಂದಲ, ಅಜ್ಞಾನ, ಆಸೆ, ಮತ್ತು ಕೋಪಗಳು ಹುಟ್ಟುತ್ತವೆ ಎಂದು ಸ್ಪಷ್ಟಪಡಿಸುತ್ತಾರೆ. ವ್ಯಕ್ತಿಯು ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅವನು ತೀವ್ರವಾಗಿ ಪ್ರತಿಕ್ರಯಿಸುತ್ತಾನೆ. ಪ್ರತಿ ಘಟನೆಯಲ್ಲಿನ ಪರಿಸ್ಥಿತಿಯನ್ನು ಸಾವಧಾನದಿಂದ ಅವಲೋಕಿಸಿ ಅದನ್ನು ಒಪ್ಪಿಕೊಳ್ಳದೆ, ತನ್ನಂತೆಯೇ ನಡೆಯಬೇಕೆಂಬ ಅವನಲ್ಲಿನ ಅಹಂಕಾರ ಇಂತಹ ಕೃತ್ಯವನ್ನು ಮಾಡಲು ಪ್ರಚೋದಿಸುತ್ತದೆ. ಮನಸ್ಸನ್ನು ಜಾಗೃತಾವಸ್ಥೆಯಲ್ಲಿ ಇಟ್ಟುಕೊಳ್ಳದೆ ಅಹಂಕಾರಕ್ಕೆ ಎಡೆಕೊಟ್ಟರೆ ಅನೇಕ ಸಲ ಜೀವನವೇ ಅಸ್ತವ್ಯಸ್ತವಾಗುವುದು. ಆದ್ದರಿಂದ ಯಾವ ವ್ಯಕ್ತಿಯೇ ಆಗಲಿ ಕೋಪತಾಪಗಳಿಗೆ ಈಡಾಗದೆ, ಅರಿವನ್ನು ಬೆಳೆಸಿಕೊಂಡು ತನ್ನ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಬೇಕು.